"ವೀರ ಕನ್ನಡಿಗ" ೨೦೦೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಮೆಹೆರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅನಿತಾ ಹಸನಂದಾನಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು "ಆಂದ್ರವಾಲ" ಎಂಬ ಹೆಸರಿನಲ್ಲಿ ಕನ್ನಡದೊಂದಿಗೆ ಏಕಕಾಲದಲ್ಲಿ ಚಿತ್ರೀಕೃತಗೊಂಡಿತು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್‌ ಅಭಿನಯಿಸಿದ ಪಾತ್ರವನ್ನು ಜೂನಿಯರ್ ಎನ್ಟಿಆರ್ ತೆಲುಗಿನಲ್ಲಿ ನಿಭಾಯಿಸಿದ್ದಾರೆ."ವೀರ ಕನ್ನಡಿಗ" ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. == ಕಥಾ ಸಾರಾಂಶ == ಮುಂಬೈ ಕೊಳೆಗೇರಿಯ ನಿವಾಸಿಗಳನ್ನು ಸದಾ ಸುರಕ್ಷಿತವಾಗಿ ಇಡುವ ಧ್ಯೇಯ ಹೊಂದಿರುವ ನಾಯಕ. ಅಲ್ಲಿನ ನಿವಾಸಿಗಳಿಗಾಗಿ ಶ್ರೇಯಕ್ಕಾಗಿ ಸದಾ ಶ್ರಮಿಸುತ್ತ ಇರುತ್ತಾನೆ. ಜೊತೆಗೆ ಆತ ತನ್ನ ತಂದೆಯ ಸಾವಿಗೆ ಕಾರಣರಾದವರನ್ನು ಸೇಡು ತೀರಿಸಿಕೊಳ್ಳುವ ಗುರಿಯನ್ನೂ ಹೊಂದಿದ್ದಾನೆ. ಆ ಗುರಿಯನ್ನು ತಲುಪುದರಲ್ಲಿ ನಾಯಕನು ಅಂತಿಮವಾಗಿ ಯಶಸ್ವಿಯಾಗುವನು. == ಪಾತ್ರವರ್ಗ == ಮುನ್ನಾ ಮತ್ತು ಶಂಕರ್ ಆಗಿ ಪುನೀತ್ ರಾಜ್‌ಕುಮಾರ್ ಚಿತ್ರಾ ಆಗಿ ಅನಿತಾ ಹಾಸನಂದನಿ ಕೌಶಲ್ಯ ಲಯಾ ಬಡೇ ಮಿಯಾ ಆಗಿ ಸಯಾಜಿ ಶಿಂಧೆ ರಿಯಾಜ್ ಖಾನ್ ಅವಿನಾಶ್ ಬೆಸೆಂಟ್ ರವಿ ಬುಲೆಟ್ ಪ್ರಕಾಶ್ == ನಿರ್ಮಾಣ ಮತ್ತು ಬಿಡುಗಡೆ == ನಿರ್ದೇಶಕ ಪುರಿ ಜಗನ್ನಾಥ್‌ಗೆ ಸಹಾಯಕ ನಿರ್ದೇಶಕರಾಗಿದ್ದ ಮೆಹರ್ ರಮೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ವೀರ ಕನ್ನಡಿಗ ಚಲನಚಿತ್ರದ ಚಿತ್ರಿಕರಣವು ೨೨ ಆಗಸ್ಟ್ ೨೦೦೩ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ ೨೫ ಕ್ಕೆ ಪೂರ್ಣಗೊಂಡಿತು. ಜನವರಿ ೨ ೨೦೦೪ರಂದು ಚಿತ್ರ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡಿತು. 100 . == ಹಾಡುಗಳು == ಈ ಚಿತ್ರದ ಸಂಗೀತ ಸಂಯೋಜನೆಯು ಚಕ್ರಿಯವರದ್ದಾಗಿದೆ. == ಉಲ್ಲೇಖಗಳು ==